ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೃಪ್ತರಾಗಿರಲು ಸಾಧ್ಯವೇ?

ಸಂತೃಪ್ತರಾಗಿರಲು ಸಾಧ್ಯವೇ?

ಸಂತೃಪ್ತರಾಗಿರಲು ಸಾಧ್ಯವೇ?

“ಸಂತೃಪ್ತಿ ಬಡವನನ್ನು ಶ್ರೀಮಂತನಾಗಿಸಿದರೆ ಅಸಂತೃಪ್ತಿ ಶ್ರೀಮಂತನನ್ನು ಬಡವನಾಗಿಸುತ್ತದೆ.” —ಬೆಂಜಮಿನ್‌ ಫ್ರಾಂಕ್ಲಿನ್‌.

ಎಡಬದಿಯ ಆ ನುಡಿಮುತ್ತಿಗನುಸಾರ ಸಂತೃಪ್ತಿಯನ್ನು ಒಂದು ವಸ್ತುವಿನಂತೆ ಖರೀದಿಸಲಾಗದು ಎಂದು ಹಲವರು ಕಲಿತಿದ್ದಾರೆ. ಹೆಚ್ಚೆಚ್ಚು ವಸ್ತುಗಳನ್ನು ಖರೀದಿಸಬೇಕು, ಇನ್ನಷ್ಟು ಸಾಧನೆ ಮಾಡಬೇಕು, ಇತರರು ನಡೆಸುವಂಥ ರೀತಿಯ ಜೀವನವನ್ನೇ ನಡೆಸಬೇಕು ಎಂಬ ಆಸೆಯನ್ನು ಈ ಲೋಕವು ಜನರಲ್ಲಿ ಹುಟ್ಟಿಸುವುದರಿಂದ ಸಂತೃಪ್ತಿ ಎನ್ನುವುದು ಕನ್ನಡಿಯೊಳಗಿನ ಗಂಟಿನಂತೆ ತೋರುತ್ತಿದೆ. ಈ ಕೆಳಗಿನವುಗಳಲ್ಲಿ ಯಾವುದಾದರೊಂದರ ಪರಿಣಾಮವಾಗಿ ನಿಮ್ಮಲ್ಲಿ ಅಸಂತೃಪ್ತಿಯ ಮನೋಭಾವ ಬೆಳೆದಿದೆಯೋ?

• ಹೆಚ್ಚೆಚ್ಚು ವಸ್ತುಗಳನ್ನು ಕೊಂಡರೆ ಮಾತ್ರ ಸಂತೃಪ್ತಿ ಸಿಗುವುದೆಂಬ ವಿಚಾರವನ್ನು ತಲೆಯಲ್ಲಿ ತುಂಬಲು ಜಾಹೀರಾತುಗಾರರು ಪ್ರಯತ್ನಿಸುತ್ತಿರುವುದು.

• ಇತರರು ಸಾಧಿಸಿದ್ದನ್ನೆಲ್ಲ ನೀವು ಸಾಧಿಸಿದರೆ ಮಾತ್ರ ನಿಮಗೆ ಬೆಲೆಯಿರುವುದೆಂದು ನೆನಸುವಂತೆ ಮಾಡುವ ಶಾಲೆ, ಕೆಲಸದ ಸ್ಥಳಗಳಲ್ಲಿನ ಪೈಪೋಟಿ.

• ನೀವು ಮಾಡುವಂಥ ಸಂಗತಿಗಳಿಗಾಗಿ ಜನರು ಕೃತಜ್ಞತೆ ತೋರಿಸದಿರುವುದು.

• ಸ್ನೇಹಿತರು ತಮ್ಮ ಬಳಿಯಿರುವ ವಸ್ತುಗಳ ಬಗ್ಗೆ ಹೇಳಿಕೊಂಡು ನಿಮ್ಮಲ್ಲಿ ಮತ್ಸರಹುಟ್ಟಿಸುವುದು.

• ಜೀವನದ ಕುರಿತ ಮೂಲಭೂತ ಪ್ರಶ್ನೆಗಳಿಗೆ ನಿಮಗೆ ಉತ್ತರ ಸಿಗದೇ ಇದ್ದದ್ದು.

ಇಂಥ ಪರಿಸ್ಥಿತಿಗಳ ಮಧ್ಯೆಯೂ ಸಂತೃಪ್ತರಾಗಿರಲು ಸಾಧ್ಯವೇ? ತಾನು ‘ತೃಪ್ತನಾಗಿರುವುದರ’ ಬಗ್ಗೆ ಅಪೊಸ್ತಲ ಪೌಲನು ಹೇಳಿದನು. ಕೆಲವೊಮ್ಮೆ ಅವನ ಬಳಿ ಅಗತ್ಯವಿದ್ದದ್ದೆಲ್ಲ ಇರುತ್ತಿತ್ತು ಇನ್ನೂ ಕೆಲವೊಮ್ಮೆ ಅವುಗಳ ಕೊರತೆಯಿರುತ್ತಿತ್ತು. ಅವನ ಸ್ನೇಹಿತರು ಅವನನ್ನು ಮೆಚ್ಚಿದರೆ ಇನ್ನೂ ಕೆಲವರು ಅವನನ್ನು ಪರಿಹಾಸ್ಯ ಮಾಡುತ್ತಿದ್ದರು. ಹಾಗಿದ್ದರೂ, “ಯಾವುದೇ ಪರಿಸ್ಥಿತಿಯಲ್ಲಿ ಸಂತೃಪ್ತನಾಗಿರುವುದನ್ನು ನಾನು ಕಲಿತುಕೊಂಡಿದ್ದೇನೆ” ಎಂದು ಅವನು ಹೇಳಿದನು.—ಫಿಲಿಪ್ಪಿ 4:11, 12, NIBV.

ಸಂತೃಪ್ತರಾಗಿರಲು ಯಾರು ಪ್ರಯತ್ನವೇ ಮಾಡುವುದಿಲ್ಲವೊ ಅವರಿಗೆ ಸಂತೃಪ್ತರಾಗಿರುವುದು ಹೇಗೆಂದು ತಿಳಿದಿರುವುದಿಲ್ಲ. ಆದರೆ ಪೌಲನು ಹೇಳಿದಂತೆ ಅದನ್ನು ಕಲಿತುಕೊಳ್ಳಬಹುದು. ಸಂತೃಪ್ತಿಗೆ ನಡೆಸುವ ಐದು ಸೂತ್ರಗಳನ್ನು ದೇವರ ವಾಕ್ಯದಿಂದ ಪರಿಶೀಲಿಸಲು ಈಗ ನಿಮ್ಮನ್ನು ಆಮಂತ್ರಿಸುತ್ತೇವೆ. (w10-E 11/01)