ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸರಿ ತಪ್ಪಿನ ಬಗ್ಗೆ ಬೈಬಲ್‌ ಕೊಡೋ ಸಲಹೆ ಈಗಲೂ ಸೂಕ್ತನಾ?

ಸರಿ ತಪ್ಪಿನ ಬಗ್ಗೆ ಬೈಬಲ್‌ ಕೊಡೋ ಸಲಹೆ ಈಗಲೂ ಸೂಕ್ತನಾ?

 ಇವತ್ತು ತುಂಬ ಜನ, ಅದ್ರಲ್ಲಿ ಕ್ರೈಸ್ತರು ಕೂಡ ಮದುವೆ ಮತ್ತು ಲೈಂಗಿಕತೆ ಬಗ್ಗೆ ಬೈಬಲ್‌ ಕೊಡೋ ಸಲಹೆಗಳು ‘ಅದೆಲ್ಲ ಹಳೇ ಕಾಲದ್ದು ನಮ್ಮ ಕಾಲಕ್ಕೆ ಸರಿ ಹೋಗಲ್ಲ’ ಅಂತ ಹೇಳ್ತಾರೆ. ಚರ್ಚಿನಲ್ಲಿರುವವರು ಜನರ ಈ ಅಭಿಪ್ರಾಯಕ್ಕೆ ತಕ್ಕಂತೆ ಕುಣಿತಾ ಇದ್ದಾರೆ. ಆದ್ರೆ ಬೈಬಲಲ್ಲಿ ಸರಿ ಮತ್ತು ತಪ್ಪಿನ ಬಗ್ಗೆ ಹೇಳಿರೋ ಸಲಹೆಗಳು ನಮ್ಮ ಕಾಲಕ್ಕೆ ಸೂಕ್ತನಾ?

ಸರಿ ಮತ್ತು ತಪ್ಪಿನ ಬಗ್ಗೆ ತಿಳ್ಕೊಳ್ಳೋಕೆ ಮನುಷ್ಯರಿಗೆ ದೇವರ ಸಹಾಯ ಬೇಕು

 ನಾವು ದೇವರಿಂದ ಸಲಹೆಗಳನ್ನು ಪಡ್ಕೊಳ್ಳೋ ರೀತಿಯಲ್ಲೇ ನಮ್ಮನ್ನ ದೇವರು ಸೃಷ್ಟಿ ಮಾಡಿದ್ದಾರೆ. ಅದಕ್ಕೆ ಬೈಬಲ್‌ ಹೇಳುತ್ತೆ: “ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ.” (ಯೆರೆಮೀಯ 10:23) ತೀರ್ಮಾನಗಳನ್ನು ತಗೊಳ್ಳೋ ಸಾಮರ್ಥ್ಯ ಇಟ್ಟು ಯೆಹೋವ a ದೇವರು ನಮ್ಮನ್ನ ಸೃಷ್ಟಿ ಮಾಡಿದ್ದಾರೆ. ಆದರೆ ಸರಿ ಯಾವುದು, ತಪ್ಪು ಯಾವುದು ಅಂತ ನಾವೇ ನಿರ್ಧಾರ ಮಾಡೋ ಅಧಿಕಾರ ನಮಗಿಲ್ಲ. ಅದಕ್ಕಾಗಿ ನಾವು ದೇವರ ಸಹಾಯ ಕೇಳಬೇಕು.—ಜ್ಞಾನೋಕ್ತಿ 3:5.

 ಸರಿ ತಪ್ಪಿನ ಬಗ್ಗೆ ದೇವರು ಕೊಡೋ ಸಲಹೆ ಬೈಬಲಲ್ಲಿ ಇದೆ. ನಾವು ಯಾಕೆ ದೇವರ ಸಹಾಯ ಪಡ್ಕೊಬೇಕು ಅನ್ನೋದಕ್ಕಿರೋ ಎರಡು ಕಾರಣಗಳನ್ನು ನೋಡೋಣ.

  •   ನಮ್ಮನ್ನು ಸೃಷ್ಟಿ ಮಾಡಿರೋದು ದೇವರೇ. (ಕೀರ್ತನೆ 100:3) ನಾವು ಆರೋಗ್ಯವಾಗಿ ಖುಷಿಖುಷಿಯಾಗಿ ಇರೋಕೆ ಏನು ಮಾಡಬೇಕು ಅಂತ ಯೆಹೋವ ದೇವರಿಗೆ ಮಾತ್ರ ಹೇಳ್ಕೊಡೋಕೆ ಆಗೋದು. ನಾವು ದೇವರ ಮಾತು ಕೇಳಿಲ್ಲ ಅಂದ್ರೆ ನಮಗೆ ಏನಾಗುತ್ತೆ ಅಂತನೂ ದೇವರಿಗೆ ಗೊತ್ತು. (ಗಲಾತ್ಯ 6:7) ದೇವರು ಯಾವಾಗ್ಲೂ ನಮ್ಮ ಒಳ್ಳೇದನ್ನೇ ಬಯಸ್ತಾರೆ. ಅದಕ್ಕೆ ಬೈಬಲಲ್ಲಿ ಹೀಗೆ ಹೇಳಿದೆ: “ನಿನ್ನ ಒಳಿತಿಗಾಗಿ ನಿನಗೆ ಬೋಧಿಸುವವನು ನಾನೇ, ನೀನು ಯಾವ ದಾರಿಯಲ್ಲಿ ನಡಿಬೇಕಂತ ನಿನಗೆ ಮಾರ್ಗದರ್ಶಿಸುವವನು ನಾನೇ.”—ಯೆಶಾಯ 48:17.

  •   ಮನಸ್ಸು ನಮ್ಮನ್ನು ಮೋಸಮಾಡುತ್ತೆ. ನಮ್ಮ ಮನಸ್ಸಿಗೆ ಇಷ್ಟ ಬಂದ ಹಾಗೆ ಏನು ಬೇಕಾದ್ರೂ ಮಾಡಬಹುದು. ಅದು ಸರಿನಾ ತಪ್ಪಾ ಅಂತ ತಲೆ ಕೆಡಿಸ್ಕೊಬೇಕಾಗಿಲ್ಲ ಅಂತ ತುಂಬ ಜನ ಅಂದ್ಕೊಳ್ತಾರೆ. ಆದ್ರೆ ಬೈಬಲ್‌ ಹೇಳೋದು: “ಹೃದಯ ಬೇರೆ ಎಲ್ಲದಕ್ಕಿಂತ ಹೆಚ್ಚು ಮೋಸ ಮಾಡುತ್ತೆ, ಅದು ಏನು ಮಾಡೋಕ್ಕೂ ಹಿಂದೆಮುಂದೆ ನೋಡಲ್ಲ.” (ಯೆರೆಮೀಯ 17:9) ಒಂದುವೇಳೆ ದೇವರು ಹೇಳಿರೋ ಮಾತು ಕೇಳಲಿಲ್ಲ ಅಂದ್ರೆ ಆಮೇಲೆ ಪಶ್ಚಾತಾಪ ಪಡಬೇಕಾಗುತ್ತೆ.—ಜ್ಞಾನೋಕ್ತಿ 28:26; ಪ್ರಸಂಗಿ 10:2.

ಧಾರ್ಮಿಕ ನಾಯಕರು ದೇವರ ಸಲಹೆಯನ್ನ ಪಾಲಿಸಬೇಕಾ?

 ಖಂಡಿತ ಪಾಲಿಸಬೇಕು. ದೇವರು ಯಾವ ರೀತಿಯ ವ್ಯಕ್ತಿ ಮತ್ತು ನಾವು ಹೇಗೆ ನಡ್ಕೊಬೇಕು ಅಂತ ಬೈಬಲ್‌ ಕಲಿಸುತ್ತೆ. (1 ಕೊರಿಂಥ 6:9-11; ಗಲಾತ್ಯ 5:19-23) ಈ ಸತ್ಯವನ್ನು ಎಲ್ರೂ ತಿಳ್ಕೊಬೇಕು ಅನ್ನೋದೇ ದೇವರ ಆಸೆ. (1 ತಿಮೊತಿ 2:3, 4) ಹಾಗಾಗಿ ಕ್ರೈಸ್ತ ಮೇಲ್ವಿಚಾರಕರು ದೇವರ ವಾಕ್ಯದಲ್ಲಿ ಇರೋ ಸತ್ಯವನ್ನು ಜನರಿಗೆ ಕಲಿಸಲೇಬೇಕು.—ತೀತ 1:7-9.

 ಬೈಬಲಲ್ಲಿರೋ ಸಲಹೆ ಪಾಲಿಸೋಕೆ ತುಂಬ ಜನರಿಗೆ ಇಷ್ಟ ಇಲ್ಲ. ಅದಕ್ಕೆ “ತಮ್ಮ ಕಿವಿಗೆ ಇಂಪಾದ ವಿಷ್ಯಗಳನ್ನ” ಹೇಳೋ ಧಾರ್ಮಿಕ ನಾಯಕರ ಬೋಧನೆ ಕೇಳೋಕೆ ಜನ ಇಷ್ಟಪಡ್ತಾರೆ. (2 ತಿಮೊತಿ 4:3) ಅದಕ್ಕೆ ಬೈಬಲ್‌ ಈ ಎಚ್ಚರಿಕೆ ಕೊಡುತ್ತೆ: “ಒಳ್ಳೇದನ್ನ ಕೆಟ್ಟದ್ದಂತ, ಕೆಟ್ಟದ್ದನ್ನ ಒಳ್ಳೇದಂತ . . . ಹೇಳುವವರ ಗತಿಯನ್ನ ಏನು ಹೇಳಲಿ!” (ಯೆಶಾಯ 5:20) ಧಾರ್ಮಿಕ ನಾಯಕರು ಸರಿ ತಪ್ಪಿನ ಬಗ್ಗೆ ಜನರಿಗೆ ಕಲಿಸದೆ ಇದ್ರೆ ದೇವರು ಅವರಿಗೆ ಶಿಕ್ಷೆ ಕೊಡ್ತಾರೆ.

ಬೇರೆಯವರ ನಂಬಿಕೆಯನ್ನು ಬೈಬಲ್‌ ವಿಮರ್ಶಿಸುತ್ತಾ?

 ಇಲ್ಲ, ದೇವರ ಸಲಹೆಯನ್ನ ಕೇಳುವವರು ಯೇಸು ಕ್ರಿಸ್ತನ ಮಾದರಿಯನ್ನು ಮತ್ತು ಆತನು ಕಲಿಸಿದ್ದನ್ನು ಪಾಲಿಸ್ತಾರೆ. ಬೇರೆಯವರಲ್ಲಿ ತಪ್ಪು ಹುಡುಕೋ ಬದಲು ಅವರನ್ನ ಪ್ರೀತಿಸಿ ಗೌರವಿಸಬೇಕು ಅಂತ ಯೇಸು ಕಲಿಸಿದರು.—ಮತ್ತಾಯ 5:43, 44; 7:1.

 ಯೇಸುವಿನ ಮಾತನ್ನು ಕೇಳೋ ನಾವೆಲ್ರೂ ದೇವರ ಸಲಹೆಯನ್ನು ಖಂಡಿತ ಪಾಲಿಸ್ತೀವಿ. ಒಂದುವೇಳೆ ಬೇರೆಯವರು ದೇವರ ಸಲಹೆ ಪಾಲಿಸಲಿಲ್ಲ ಅಂದ್ರೂ ನಾವು ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು ಅಂತನೂ ಯೇಸು ಕಲಿಸಿದರು. (ಮತ್ತಾಯ 10:14) ದೇವರು ಹೇಳಿದನ್ನು ಕೇಳಲೇ ಬೇಕು ಅಂತ ನಾವು ಬೇರೆಯವರನ್ನ ಒತ್ತಾಯ ಮಾಡೋಕ್ಕಾಗಲಿ ಅವರ ಮೇಲೆ ಅಧಿಕಾರ ಚಲಾಯಿಸೋಕ್ಕಾಗಲಿ ಹೋಗಬಾರದು.—ಯೋಹಾನ 17:14, 16; 18:36.

ದೇವರ ಸಲಹೆ ಪಾಲಿಸೋದ್ರಿಂದ ಏನು ಪ್ರಯೋಜನ?

a ಯೆಹೋವ ಅನ್ನೋದು ಬೈಬಲಲ್ಲಿ ತಿಳಿಸಿರೋ ದೇವರ ಹೆಸರು.—ಕೀರ್ತನೆ 83:18.