ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Comstock Images/Stockbyte via Getty Images

ಭ್ರಷ್ಟ ನಾಯಕರು—ದೇವರ ಸರ್ಕಾರ ಏನು ಮಾಡುತ್ತೆ?

ಭ್ರಷ್ಟ ನಾಯಕರು—ದೇವರ ಸರ್ಕಾರ ಏನು ಮಾಡುತ್ತೆ?

 ನಂಬಿಕೆಯನ್ನ ಉಳಿಸಿಕೊಳ್ಳೋ ನಾಯಕರು ಬೇಕು ಅಂತ ಜನ ಇಷ್ಟಪಡ್ತಾರೆ. ಆದ್ರೆ ಈಗ ಜನ ಭ್ರಷ್ಟ ನಾಯಕರನ್ನ ನೋಡಿ ನೋಡಿ ಬೇಸತ್ತು ಹೋಗಿದ್ದಾರೆ. ಇವತ್ತು ಜನ ತುಂಬ ಕಮ್ಮಿ ನಂಬೋದು ಸರ್ಕಾರಿ ಅಧಿಕಾರಿಗಳನ್ನೇ ಅಂತ 2023ರಲ್ಲಿ ಮಾಡಿದ ಒಂದು ಸರ್ವೇ ತಿಳಿಸ್ತು. a

 ದೇವರು ಒಂದು ಸರ್ಕಾರವನ್ನ ತರುತ್ತಾನೆ, ಅದರ ನಾಯಕ ಯೇಸು ಕ್ರಿಸ್ತ. ಆತನನ್ನ ನಾವು ಕಣ್ಮುಚ್ಚಿ ನಂಬಬಹುದು. ಯಾಕಂದ್ರೆ ಆತನು ಪ್ರಾಮಾಣಿಕ ಮತ್ತು ಆತನಲ್ಲಿ ಭ್ರಷ್ಟಾಚಾರದ ಸುಳಿವೇ ಇಲ್ಲ ಅಂತ ಬೈಬಲ್‌ ಹೇಳುತ್ತೆ.—ಯೆಶಾಯ 9:7.

 ಜನರ ಮೇಲೆ ತುಂಬ ಪ್ರೀತಿ, ಕಾಳಜಿ ಇದೆ ಅಂತ ಯೇಸು ತನ್ನ ನಡತೆ ಮೂಲಕ ತೋರಿಸಿಕೊಟ್ಟಿದ್ದಾನೆ. (ಮತ್ತಾಯ 9:35, 36) ದೇವರ ಸರ್ಕಾರದ ರಾಜ ಯೇಸು. ಆತನನ್ನ ಒಬ್ಬ ಒಳ್ಳೆ ನಾಯಕನಾಗಿ ಯಾರೆಲ್ಲಾ ಒಪ್ಪಿಕೊಳ್ಳುತ್ತಾರೋ ಅವರಿಗೆಲ್ಲಾ ನ್ಯಾಯ ಮತ್ತು ಶಾಂತಿಯನ್ನ ಕೊಡ್ತಾನೆ.—ಕೀರ್ತನೆ 72:12-14.

a 2023 ಎಡೆಲ್‌ಮಾನ್‌ ಟ್ರಸ್ಟ್‌ ಬಾರೋಮೀಟರ್‌ ಗ್ಲೋಬಲ್‌ ರಿಪೋರ್ಟ್‌.