ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 66

ಸಿಹಿಸುದ್ದಿ ಸಾರೋಣ

ಸಿಹಿಸುದ್ದಿ ಸಾರೋಣ

(ಪ್ರಕಟನೆ 14:6, 7)

  1. 1. ಕಣ್ಣೀರಿನ ಈ ಜೀವನ ಬಲ್ಲ ದೇವ;

    ಈ ನೋವು ದೂರ ಮಾಡುವ ತುಂಬ ಬೇಗ.

    ಈ ಭೂಮಿಯನ್ನು ಆಳಲು ಕ್ರಿಸ್ತ ಯೇಸು,

    ಉಲ್ಲಾಸದ ಸಂಗೀತವೇ ನಮ್ಮ ಬಾಳು!

    ಪೂರೈಸುವ ಯೆಹೋವ ತನ್ನ ಮಾತೆಲ್ಲಾ;

    ಯೇಸು ಮುಖೇನ ನೀಡುವನು ನಿತ್ಯ ಜೀವ.

    ಅನಂತ ಕಾಲ ಬಾಳುವಂತ ಈ ಭಾಗ್ಯ,

    ದಯಾಮಯಿ ಯೆಹೋವ ತಂದ ಸೌಭಾಗ್ಯ!

  2. 2. ಸಮೀಪ ಈಗ ದೇವರ ಹೊಸ ಲೋಕ;

    ಮರೆ ಆಗೋದು ನಮ್ಮಯ ಎಲ್ಲಾ ಶೋಕ.

    ಸುಳ್ಳಾಗದು ಯೆಹೋವನ ಈ ವಾಗ್ದಾನ;

    ಎಲ್ಲೆಲ್ಲೂ ಈ ಸಂದೇಶ ನಾವು ಸಾರೋಣ.

    ಜೊತೆ ಇದ್ದಾಗ ದೂತರು ಭಯ ಯಾಕೆ?

    ಸಹಾಯ ನೀಡುತ್ತಾರೆ ಸತತ ಸಾರೋಕೆ.

    ಮಹಾ ಸುಯೋಗ ನೀಡಿದ ನಮ್ಮ ದೇವಾ

    ತನ್ನ ಪವಿತ್ರ ನಾಮ ಸಾರುವ ಭಾಗ್ಯ.