ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಬೈಬಲ್‌ ಸ್ಟಡಿಗೆ ಸಂಬಂಧಪಟ್ಟ ವಿಡಿಯೋಗಳನ್ನ ಬಳಸೋದು ಹೇಗೆ?

ಬೈಬಲ್‌ ಸ್ಟಡಿಗೆ ಸಂಬಂಧಪಟ್ಟ ವಿಡಿಯೋಗಳನ್ನ ಬಳಸೋದು ಹೇಗೆ?

ಸೇವೆಯಲ್ಲಿ ಬಳಸೋಕೆ ಬೈಬಲ್‌ ಸ್ಟಡಿಗೆ ಸಂಬಂಧಪಟ್ಟ ನಾಲ್ಕು ವಿಡಿಯೋಗಳಿವೆ. ಪ್ರತಿಯೊಂದು ವಿಡಿಯೋಗಳನ್ನ ಯಾವ ಉದ್ದೇಶದಿಂದ ತಯಾರಿಸಲಾಗಿದೆ ಅಂತ ನೋಡೋಣ.

  • ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು?—ಪೂರ್ಣ ಭಾಗ. ಜನರು ಯಾವುದೇ ಧಾರ್ಮಿಕ ಹಿನ್ನೆಲೆಯವರಾಗಿದ್ದರೂ ಅವರಿಗೆ ಬೈಬಲಿನ ಮೇಲೆ ಆಸಕ್ತಿ ಹುಟ್ಟಿಸಲಿಕ್ಕಾಗಿ ಈ ವಿಡಿಯೋವನ್ನ ತಯಾರಿಸಲಾಗಿದೆ. ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಕೆ ಮತ್ತು ಸರಿಯಾದ ಮಾಹಿತಿಯನ್ನ ತಿಳಿದುಕೊಳ್ಳೋಕೆ ಬೈಬಲ್‌ ಸಹಾಯ ಮಾಡುತ್ತೆ ಅಂತ ಈ ವಿಡಿಯೋ ತಿಳಿಸುತ್ತೆ. ಬೈಬಲ್‌ ಸ್ಟಡಿಗಾಗಿ ವಿನಂತಿಸುವುದು ಹೇಗೆ ಅಂತನೂ ತಿಳಿಸುತ್ತೆ.

  • ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಇದು ಪೂರ್ಣ ಭಾಗದ ವಿಡಿಯೋದಷ್ಟು ಉದ್ದ ಇಲ್ಲ. ಇದನ್ನ ಬ್ಯುಸಿಯಾಗಿರೋ ಜನರಿಗೆ ತೋರಿಸಬಹುದು.

  • ಬೈಬಲ್‌ ಅಧ್ಯಯನ ಅಂದರೇನು? ಉಚಿತ ಬೈಬಲ್‌ ಸ್ಟಡಿಯ ಕಡೆಗೆ ಜನರ ಗಮನ ಸೆಳೆಯಲು ತಯಾರಿಸಲಾಗಿದೆ. ಸ್ಟಡಿಗೆ ಸಂಬಂಧಪಟ್ಟ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡುತ್ತೆ ಮತ್ತು ಬೈಬಲ್‌ ಸ್ಟಡಿಗಾಗಿ ವಿನಂತಿಸುವುದು ಹೇಗೆ ಅಂತನೂ ತಿಳಿಸುತ್ತೆ.

  • ಬೈಬಲ್‌ ಸ್ಟಡಿಯನ್ನು ಆನಂದಿಸಿ ಇದನ್ನ ಬೈಬಲ್‌ ಸ್ಟಡಿ ಶುರು ಮಾಡೋದಕ್ಕಿಂತ ಮುಂಚೆ ತೋರಿಸಲಿಕ್ಕಾಗಿ ತಯಾರಿಸಲಾಗಿದೆ. ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ 2ನೇ ಪುಟದಲ್ಲಿ ಈ ವಿಡಿಯೋ ಇದೆ. ಹಾಗಿದ್ರೂ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯಿಂದ ಚರ್ಚೆ ಶುರು ಮಾಡುವ ಮುಂಚೆನೂ ಈ ವಿಡಿಯೋ ತೋರಿಸಬಹುದು. ಈ ಪುಸ್ತಕದಲ್ಲಿ ಏನೇನಿದೆ ಮತ್ತು ಅದರಲ್ಲಿರುವ ವಿಷಯಗಳನ್ನ ಅರ್ಥಮಾಡಿಕೊಳ್ಳೋಕೆ ವಿದ್ಯಾರ್ಥಿ ಏನು ಮಾಡಬೇಕು ಅಂತ ತಿಳಿಸುತ್ತೆ.

ಪ್ರತಿಯೊಂದು ವಿಡಿಯೋವನ್ನ ಒಂದೊಂದು ಉದ್ದೇಶದಿಂದ ಮಾಡಲಾಗಿದೆ. ಹಾಗಿದ್ರೂ ಸನ್ನಿವೇಶಕ್ಕೆ ತಕ್ಕಂತೆ ಯಾವ ವಿಡಿಯೋ ಬೇಕಾದ್ರೂ ಜನರಿಗೆ ತೋರಿಸಬಹುದು ಅಥವಾ ಕಳುಹಿಸಬಹುದು. ಪ್ರಚಾರಕರು ಪ್ರತಿಯೊಂದು ವಿಡಿಯೋ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು ಮತ್ತು ಅದನ್ನ ಸೇವೆಯಲ್ಲಿ ಬಳಸಬೇಕು.