ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು

2020 ರ “ಯಾವಾಗಲೂ ಖುಷಿಯಾಗಿರಿ”! ಪ್ರಾದೇಶಿಕ ಅಧಿವೇಶನದ ಭಾಷಾಂತರ ಕೆಲಸ

2020 ರ “ಯಾವಾಗಲೂ ಖುಷಿಯಾಗಿರಿ”! ಪ್ರಾದೇಶಿಕ ಅಧಿವೇಶನದ ಭಾಷಾಂತರ ಕೆಲಸ

ಜುಲೈ 10, 2020

 ಇತಿಹಾಸದಲ್ಲೇ ಮೊಟ್ಟ ಮೊದಲ ಸಲ ಎಲ್ಲಾ ಯೆಹೋವನ ಸಾಕ್ಷಿಗಳು ಒಂದೇ ಸಲ ಪ್ರಾದೇಶಿಕ ಅಧಿವೇಶನವನ್ನ ಹಾಜರಾಗ್ತಿದ್ದಾರೆ. ಇದು 2020 ರ ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ನಡೀತಿದೆ. ಹೀಗೆ ಎಲ್ಲರೂ ಒಂದೇ ಸಲ ನೋಡಬೇಕಂದ್ರೆ ಸುಮಾರು 500 ಭಾಷೆಗಳಿಗೆ ಈ ಕಾರ್ಯಕ್ರಮ ಭಾಷಾಂತರ ಆಗಬೇಕು. ಸಾಮಾನ್ಯವಾಗಿ ಈ ಕಾರ್ಯಕ್ರಮನ ಪ್ಲಾನ್‌ ಮಾಡಿ ಪೂರ್ತಿ ಮಾಡಬೇಕಂದ್ರೆ ಒಂದು ವರ್ಷ ಅಥ್ವಾ ಅದಕ್ಕಿಂತ ಜಾಸ್ತಿ ಸಮಯ ಹಿಡಿಯುತ್ತೆ. ಆದರೆ ಕೊರೋನ ವೈರಸ್‌ ಎಲ್ಲಾ ಕಡೆ ಹರಡ್ತಾ ಇರೋದ್ರಿಂದ 2020 ರ “ಯಾವಾಗಲೂ ಖುಷಿಯಾಗಿರಿ”! ಪ್ರಾದೇಶಿಕ ಅಧಿವೇಶನದ ಕಾರ್ಯಕ್ರಮವನ್ನ ಭಾಷಾಂತರ ಮಾಡೋಕೆ ಸಹೋದರ ಸಹೋದರಿಯರಿಗೆ 4 ತಿಂಗಳಿಗಿಂತ ಕಮ್ಮಿ ಸಮಯ ಇತ್ತು.

 ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿರೋ ಟ್ರಾನ್ಸ್‌ಲೇಶನ್‌ ಸರ್ವೀಸಸ್‌ ಆಂಡ್‌ ಗ್ಲೋಬಲ್‌ ಪರ್ಚೇಸಿಂಗ್‌ ಡಿಪಾರ್ಟ್‌ಮೆಂಟ್‌ ಈ ದೊಡ್ಡ ಪ್ರಾಜೆಕ್ಟನ್ನ ಮಾಡೋಕೆ ಸಹಾಯ ಮಾಡ್ತು. ಈ ಕಾರ್ಯಕ್ರಮನ ಭಾಷಾಂತರ ಮಾಡಬೇಕಂದ್ರೆ ಭಾಷಾಂತರ ತಂಡಗಳಿಗೆ ಒಳ್ಳೇ ಗುಣಮಟ್ಟದ ಮೈಕ್ರೋಫೋನ್‌ಗಳು ಬೇಕಾಗಿತ್ತು. ಅದಕ್ಕೆ ಗ್ಲೋಬಲ್‌ ಪರ್ಚೇಸಿಂಗ್‌ ಡಿಪಾರ್ಟ್‌ಮೆಂಟ್‌ 1,000 ಮೈಕ್ರೋಫೋನ್‌ಗಳನ್ನ ಖರೀದಿ ಮಾಡಿ ಸುಮಾರು 200 ಜಾಗಗಳಿಗೆ ಕಳಿಸಿಕೊಡ್ತು.

 ಒಂದೇ ಸಲ ಜಾಸ್ತಿ ಮೈಕ್ರೋಫೋನ್‌ಗಳನ್ನ ತಗೊಂಡಿದ್ರಿಂದ ದುಡ್ಡು ಉಳಿತಾಯ ಆಯ್ತು. ಈ ಎಲ್ಲಾ ಮೈಕ್ರೋಫೋನ್‌ಗಳನ್ನ ಒಂದು ಜಾಗಕ್ಕೆ ತಗೊಂಡು ಬಂದು ಅಲ್ಲಿಂದ ಲೋಕದ ಬೇರೆ ಬೇರೆ ಜಾಗಗಳಿಗೆ ಕಳಿಸಿಕೊಟ್ರು. ಈ ರೀತಿ ಒಂದೇ ಸಲ ತಗೊಂಡಿದ್ರಿಂದ ಒಂದು ಮೈಕ್ರೋಫೋನ್‌ ಬೆಲೆ ಡೆಲಿವರಿ ಚಾರ್ಜ್‌ ಸೇರಿ 12,750 ರೂಪಾಯಿಗಳಾಯ್ತು. ಇದ್ರಿಂದ 20 ಪರ್ಸೆಂಟ್‌ ಉಳಿತಾಯ ಆಯ್ತು.

 ಗ್ಲೋಬಲ್‌ ಪರ್ಚೇಸಿಂಗ್‌ ಡಿಪಾರ್ಟ್‌ಮೆಂಟ್‌ ಈ ಮೈಕ್ರೋಫೋನ್‌ಗಳನ್ನ ಎಲ್ಲಾ ಕಡೆ ಕಳಿಸಬೇಕಾಗಿದ್ದಿದ್ದು ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ. ಆದ್ರೆ ನಮ್ಗೇ ಗೊತ್ತು ಆ ತಿಂಗಳಲ್ಲಿ ಲಾಕ್‌ಡೌನ್‌ ಇದ್ದಿದ್ರಿಂದ ಹೆಚ್ಚಿನ ವ್ಯಾಪಾರ ವ್ಯವಹಾರಗಳು ನಡೀತಿರಲಿಲ್ಲ. ಇಷ್ಟೆಲ್ಲಾ ಕಷ್ಟ ಇದ್ರೂ ಮೇ ತಿಂಗಳ ಕೊನೆಯಷ್ಟರಲ್ಲಿ ಭಾಷಾಂತರ ಕಛೇರಿ, ಬ್ರಾಂಚ್‌ ಆಫೀಸ್‌ ಮತ್ತು ಇನ್ನೂ ಯಾವೆಲ್ಲಾ ಜಾಗಗಳಿಗೆ ಮೈಕ್ರೋಫೋನ್‌ ಬೇಕಿತ್ತೋ ಅಲ್ಲೆಲ್ಲಾ ಕಳಿಸಿಕೊಟ್ರು.

 “ಈ ರೀತಿ ಮೈಕ್ರೋಫೋನ್‌ಗಳನ್ನ ಒಂದು ಕಡೆಯಿಂದ ಇನ್ನೊಂದು ಕಡೆ ಕಳಿಸೋಕೆ ಬೆತೆಲ್‌ ಡಿಪಾರ್ಟ್‌ಮೆಂಟ್‌ಗಳು ಮತ್ತು ವ್ಯಾಪಾರಿಗಳ ಮಧ್ಯೆ ಒಳ್ಳೇ ಸಹಕಾರ ಇತ್ತು. ಇಷ್ಟು ಬೇಗ ಇಷ್ಟು ಕಮ್ಮೀ ದುಡ್ಡಲ್ಲಿ ಸಹೋದರ ಸಹೋದರಿಯರಿಗೆ ವಸ್ತುಗಳನ್ನ ಕಳಿಸಿಕೊಡಕ್ಕೆ ಯೆಹೋವ ದೇವರ ಪವಿತ್ರಾತ್ಮನೇ ನಮಗೆ ಸಹಾಯ ಮಾಡ್ತು” ಅಂತ ಗ್ಲೋಬಲ್‌ ಪರ್ಚೇಸಿಂಗ್‌ ಡಿಪಾರ್ಟ್‌ಮೆಂಟ್‌ನ ಮೇಲ್ವಿಚಾರಕರಾದ ಸಹೋದರ ಜೇ ಸ್ವಿನ್ನಿ ಹೇಳಿದ್ರು.

 ಟ್ರಾನ್ಸ್‌ಲೇಶನ್‌ ಸರ್ವೀಸಸ್‌ ಜೊತೆ ಕೆಲಸ ಮಾಡೋ ಸಹೋದರ ನಿಕೊಲಾಸ್‌ ಅಲ್ಲಾಡಿಸ್‌ ಹೀಗೆ ಹೇಳಿದ್ರು: “ಲಾಕ್‌ಡೌನ್‌ ಇದ್ದಾಗಲೂ ತಮಗೆ ಮೈಕ್ರೋಫೋನ್‌ ಸಿಕ್ಕಿದಕ್ಕೆ ಭಾಷಾಂತರಗಾರರಿಗೆ ತುಂಬ ಖುಷಿಯಾಯ್ತು. ಭಾಷಾಂತರ ಮಾಡುವಾಗ ದೂರ ದೂರ ಇದ್ರುನೂ ಒಬ್ಬರಿಗೊಬ್ಬರು ಸಹಕಾರ ಕೊಡ್ತಾ ಭಾಷಣಗಳನ್ನ, ಡ್ರಾಮಾಗಳನ್ನ, ಹಾಡುಗಳನ್ನ ಸುಮಾರು 500ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಭಾಷಾಂತರ ಮಾಡಿದ್ರು.”

 ಲೋಕವ್ಯಾಪಕವಾಗಿ ಇರುವ ನಮ್ಮ ಸಹೋದರರಿಗೋಸ್ಕರ 2020 ರ “ಯಾವಾಗಲೂ ಖುಷಿಯಾಗಿರಿ”! ಅನ್ನೋ ಪ್ರಾದೇಶಿಕ ಅಧಿವೇಶವನ್ನು ತಯಾರಿಸಲು ಸಹಾಯ ಮಾಡಿದ ಅನೇಕ ಪ್ರಾಜೇಕ್ಟ್‌ಗಳಲ್ಲಿ  ಇದು ಒಂದು. ನೀವು donate.isa4310.com ಮೂಲಕ ಕೊಟ್ಟ ಉದಾರ ಕಾಣಿಕೆಗಳಿಂದ ನಾವು ಈ ತರ ಬೇಕಾದ ವಸ್ತುಗಳನ್ನ ಖರೀದಿ ಮಾಡಕ್ಕೆ ಆಯ್ತು. ಅದಕ್ಕಾಗಿ ನಿಮಗೆ ತುಂಬ ಧನ್ಯವಾದಗಳು.