ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

alashi/DigitalVision Vectors via Getty Images

ಸದಾ ಎಚ್ಚರವಾಗಿರಿ!

ಯಾಕಿಷ್ಟು ದ್ವೇಷ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಯಾಕಿಷ್ಟು ದ್ವೇಷ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ನ್ಯೂಸ್‌ನಲ್ಲಿ ಬರೀ ದ್ವೇಷ, ಹಿಂಸೆ, ಜಗಳ ಮತ್ತು ಯುದ್ಧ ಆಗ್ತಿರೋದನ್ನ ಕೇಳಿಸ್ಕೊಳ್ತೀವಿ.

  •   “ಇತ್ತೀಚಿಗೆ ಇಸ್ರೇಲ್‌ ಮತ್ತು ಗಾಜಾ ಮಧ್ಯ ಯುದ್ಧ ಆಗ್ತಿರೋದನ್ನ ನೋಡಿ ಇಂಟರ್‌ನೆಟ್ಟಲ್ಲಿ ದ್ವೇಷ ತುಂಬಿರೋ ಮಾತುಗಳನ್ನೇ ತುಂಬ ಜನ ಮಾತಾಡ್ತಿದ್ದಾರೆ.”—ದ ನ್ಯೂ ಯಾರ್ಕ್‌ ಟೈಮ್ಸ್‌, ನವೆಂಬರ್‌ 15, 2023.

  •   “ದ್ವೇಷ ತುಂಬಿರೋ ಮಾತುಗಳು, ದ್ವೇಷದಿಂದ ಮಾಡೋ ಕ್ರೈಂಗಳು ಅಕ್ಟೋಬರ್‌ 7ರಿಂದ ಈ ಲೋಕದಲ್ಲಿ ಹಿಂದೆಂದಿಗಿಂತಲೂ ಜಾಸ್ತಿ ಆಗ್ತಾ ಇದೆ.”—ಡೆನ್ನಿಸ್‌ ಫ್ರಾನ್ಸಿಸ್‌, ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷರು, ನವೆಂಬರ್‌ 3, 2023.

 ದ್ವೇಷ ತುಂಬಿರೋ ಮಾತುಗಳು, ಹಿಂಸೆ ಮತ್ತು ಯುದ್ಧ ಇದ್ಯಾವುದೂ ಹೊಸದಲ್ಲ. ಈ ತರ ಮುಂಚೆನೂ ನಡೀತಿತ್ತು. ಇಂಥ ಕೆಟ್ಟ ಕೆಲಸ ಮಾಡ್ತಿದ್ದ ಜನರು “ಚುಚ್ಚೋ ಮಾತುಗಳನ್ನ ಬಾಣಗಳ ತರ ಗುರಿ” ಇಡ್ತಿದ್ರು ಅಂತ ಬೈಬಲ್‌ ಹೇಳುತ್ತೆ. (ಕೀರ್ತನೆ 64:3; 120:7; 140:1) ಆದರೆ ಈಗ ಜನರ ಮಧ್ಯ ದ್ವೇಷ ತುಂಬಿ ತುಳುಕ್ತಾ ಇರೋದಕ್ಕೆ ಮುಖ್ಯ ಕಾರಣ ಏನು ಅಂತ ಬೈಬಲ್‌ ಹೇಳುತ್ತೆ.

ದ್ವೇಷ—ಈಗಿನ ಸಮಯದ ಗುರುತು

 ಇಷ್ಟೊಂದು ದ್ವೇಷ ಯಾಕಿದೆ ಅನ್ನೋದಕ್ಕೆ ಬೈಬಲ್‌ ಎರಡು ಕಾರಣಗಳನ್ನ ಕೊಡುತ್ತೆ.

  1.  1. “ತುಂಬ ಜನ್ರ ಪ್ರೀತಿ ತಣ್ಣಗಾಗುತ್ತೆ” ಅಂತ ಬೈಬಲ್‌ ಮುಂಚೆನೇ ತಿಳಿಸಿತ್ತು. (ಮತ್ತಾಯ 24:12) ಅದಕ್ಕೆ ಇವತ್ತು ಜನರ ಮಧ್ಯ ಪ್ರೀತಿ ಇಲ್ಲ. ಅವರು ಒಬ್ಬರು ಇನ್ನೊಬ್ಬರನ್ನ ದ್ವೇಷಿಸೋ ತರ ಕೆಟ್ಟ ಕೆಲಸಗಳನ್ನ ಮಾಡ್ತಿದ್ದಾರೆ.—2 ತಿಮೊತಿ 3:1-5.

  2.  2. ಇವತ್ತು ಎಲ್ಲ ಕಡೆ ದ್ವೇಷ ತುಂಬಿ ತುಳುಕ್ತಾ ಇರೋದಕ್ಕೆ ಕಾರಣ ಸೈತಾನನೇ. “ಇಡೀ ಲೋಕ ಸೈತಾನನ ಕೈಯಲ್ಲಿದೆ” ಅಂತ ಬೈಬಲ್‌ ಹೇಳುತ್ತೆ.—1 ಯೋಹಾನ 5:19; ಪ್ರಕಟನೆ 12:9, 12.

 ಈ ದ್ವೇಷಕ್ಕೆ ಕಾರಣ ಆಗಿರೋ ಪ್ರತಿಯೊಂದನ್ನ ಆದಷ್ಟು ಬೇಗ ದೇವರು ತೆಗೆದುಹಾಕ್ತಾನೆ ಅಂತ ಬೈಬಲ್‌ ಹೇಳುತ್ತೆ. ಅಷ್ಟೇ ಅಲ್ಲ ದ್ವೇಷದಿಂದ ಆದ ನೋವನ್ನ ಯೆಹೋವ ಇಲ್ಲದೆ ಇರೋ ತರ ಮಾಡ್ತಾನೆ. ಅದನ್ನ ನಂಬೋಕೆ ಬೈಬಲಲ್ಲಿರೋ ಈ ಮಾತುಗಳು ಸಹಾಯಮಾಡುತ್ತೆ:

  •   “ದೇವರು ಅವ್ರ ಕಣ್ಣೀರನ್ನೆಲ್ಲಾ ಒರಸಿಬಿಡ್ತಾನೆ. ಇನ್ಮುಂದೆ ಸಾವೇ ಇರಲ್ಲ. ದುಃಖ, ನೋವು, ಕಷ್ಟ ಇರಲ್ಲ. ಈ ಮುಂಚೆ ಇದ್ದ ಯಾವ ವಿಷ್ಯಗಳೂ ಈಗ ಇಲ್ಲ.”—ಪ್ರಕಟನೆ 21:4.