ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ilbusca/E+ via Getty Images

ಸದಾ ಎಚ್ಚರವಾಗಿರಿ!

ಜನರಲ್ಲಿ ಯಾಕೆ ಶಾಂತಿ ಇಲ್ಲ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಜನರಲ್ಲಿ ಯಾಕೆ ಶಾಂತಿ ಇಲ್ಲ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ಲೋಕದಲ್ಲಿರೋ ಜನನಾಯಕರಿಗೆ ಮತ್ತು ಅಂತರಾಷ್ಟ್ರೀಯ ಸಂಘಟನೆಗಳಿಗೆ ಸಂಪೂರ್ಣ ಶಾಂತಿಯನ್ನ ಸ್ಥಾಪಿಸೋಕೆ ಆಗಿಲ್ಲ. ಎರಡನೇ ಮಹಾಯುದ್ಧದ ನಂತರ ಇತ್ತೀಚೆಗೆ ತುಂಬ ಅಹಿತಕರ ಘಟನೆಗಳು ನಡೆಯುತ್ತಿದೆ. ಸುಮಾರು 200ಕೋಟಿ ಜನ ಅಂದ್ರೆ ಜಗತ್ತಿನ ಕಾಲುಭಾಗದಷ್ಟು ಜನ ಅಶಾಂತಿ ತುಂಬಿರೋ ಸ್ಥಳಗಳಲ್ಲಿ ವಾಸಮಾಡ್ತಿದ್ದಾರೆ.

 ಮಾನವನಿಗೆ ಯಾಕೆ ಶಾಂತಿ ತರೋಕೆ ಆಗಲ್ಲ? ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಮಾನವನಿಗೆ ಶಾಂತಿ ತರೋಕೆ ಆಗದಿರೋ ಮೂರು ಕಾರಣಗಳು

  1.  1. ಕೆಲವು ಜನರ ಮನೋಭಾವದಿಂದ ಶಾಂತಿಯಿಂದ ಇರೋಕೆ ಪ್ರಯತ್ನ ಮಾಡ್ತಿರೋ ಜನರಿಗೂ ಶಾಂತಿಯಿಂದ ಇರೋಕೆ ಆಗ್ತಿಲ್ಲ. ನಮ್ಮ ಸಮಯದಲ್ಲಿ ಜನ “ತಮ್ಮ ಬಗ್ಗೆನೇ ಯೋಚಿಸುವವರು, ಹಣದಾಸೆ ಇರುವವರು, ತಮ್ಮ ಬಗ್ಗೆ ಕೊಚ್ಕೊಳ್ಳುವವರು, ಅಹಂಕಾರಿಗಳು, . . . ನಂಬಿಕೆದ್ರೋಹ ಮಾಡುವವರು, . . . ಯಾವುದಕ್ಕೂ ಒಪ್ಪದವರು, . . . ತಮ್ಮನ್ನ ಹತೋಟಿಯಲ್ಲಿ ಇಟ್ಕೊಳ್ಳದವರು, ಉಗ್ರರು, . . . ಹಠಮಾರಿಗಳು, ಜಂಬದಿಂದ ಉಬ್ಬಿದವರು” ಆಗಿರ್ತಾರೆ ಅಂತ ಬೈಬಲ್‌ ಮುಂಚೆನೇ ಹೇಳಿತ್ತು.—2 ತಿಮೊತಿ 3:2-4.

  2.  2. ಸೃಷ್ಟಿಕರ್ತನಾದ ಯೆಹೋವ a ದೇವರ ಸಹಾಯ ಇಲ್ಲದೆ ಸಮಸ್ಯೆಗಳನ್ನ ಸರಿಮಾಡೋ ಸಾಮರ್ಥ್ಯ ಯಾವುದೇ ಮನುಷ್ಯನಿಗೆ ಅಥವಾ ಯಾವುದೇ ಮಾನವ ಸಂಘಟನೆಗಳಿಗೆ ಇಲ್ಲ. “ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ” ಅಂತ ಬೈಬಲ್‌ ಹೇಳುತ್ತೆ.—ಯೆರೆಮೀಯ 10:23.

  3.  3. “ಇಡೀ ಭೂಮಿಯಲ್ಲಿರೋ ಜನ್ರನ್ನ ತಪ್ಪುದಾರಿಗೆ ನಡಿಸ್ತಾ” ಇರೋ ಶಕ್ತಿಶಾಲಿ ದುಷ್ಟನಾದ ಸೈತಾನನ ಕೈಯಲ್ಲಿ ಇವತ್ತು ಈ ಲೋಕವಿದೆ. (ಪ್ರಕಟನೆ 12:9) ಅಷ್ಟೇ ಅಲ್ಲ ‘ಇಡೀ ಲೋಕ ಸೈತಾನನ ಕೈಯಲ್ಲಿ’ ಇರೋದ್ರಿಂದ ಯುದ್ಧಗಳು, ಜಗಳಗಳು ಆಗ್ತಾ ಇರುತ್ತೆ.—1 ಯೋಹಾನ 5:19.

ಯಾರು ಶಾಂತಿ ತರ್ತಾರೆ?

 ಶಾಂತಿಯನ್ನ ಮನುಷ್ಯರಿಂದ ತರೋಕೆ ಆಗಲ್ಲ. ಬದಲಿಗೆ ದೇವರಿಂದ ತರೋಕೆ ಆಗುತ್ತೆ ಅಂತ ಬೈಬಲ್‌ ಮಾತು ಕೊಡುತ್ತೆ.

  •   “ಯೆಹೋವ ಹೇಳೋದು ಏನಂದ್ರೆ ‘ನಿಮಗೆ ಒಳ್ಳೇದು ಮಾಡಬೇಕಂತ ಯೋಚ್ನೆ ಮಾಡಿದ್ದೀನಿ. ನೀವು ಶಾಂತಿ ನೆಮ್ಮದಿಯಿಂದ ಬದುಕಬೇಕು, ನಿಮಗೆ ಕೆಟ್ಟದು ಆಗಬಾರದು, ನಿಮ್ಮ ಭವಿಷ್ಯ ಚೆನ್ನಾಗಿರಬೇಕು, ನೀವು ಒಳ್ಳೇದನ್ನ ಎದುರುನೋಡಬೇಕು ಅನ್ನೋದೇ ನನ್ನ ಆಸೆ.”—ಯೆರೆಮೀಯ 29:11.

 ಆ ಮಾತನ್ನ ದೇವರು ಹೇಗೆ ನೆರವೇರಿಸ್ತಾನೆ? “ಶಾಂತಿಯನ್ನ ಕೊಡೋ ದೇವರು ಬೇಗ ಸೈತಾನನನ್ನ . . . ಜಜ್ಜಿಬಿಡ್ತಾನೆ.” (ರೋಮನ್ನರಿಗೆ 16:20) ಬೈಬಲಿನಲ್ಲಿ ಹೇಳಿರೋ ತರ “ದೇವರು ತನ್ನ ಸರ್ಕಾರವನ್ನ,” ತಂದು ಇಡೀ ಲೋಕದಲ್ಲಿ ಶಾಂತಿ ತರ್ತಾನೆ. (ಲೂಕ 4:43) ಶಾಂತಿಯಿಂದ ಇರೋದು ಹೇಗೆ ಅಂತ ದೇವರ ಸರ್ಕಾರದ ರಾಜನಾದ ಯೇಸು ಕ್ರಿಸ್ತ ಜನರಿಗೆ ಕಲಿಸ್ತಾನೆ.—ಯೆಶಾಯ 9:6, 7.

a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.