ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

Anton Petrus/Moment via Getty Images

ಸದಾ ಎಚ್ಚರವಾಗಿರಿ!

ಅತಿ ಬೇಗ ಮಹಾ ಲೋಕ ಯುದ್ಧ ಶುರು ಆಗುತ್ತಾ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಅತಿ ಬೇಗ ಮಹಾ ಲೋಕ ಯುದ್ಧ ಶುರು ಆಗುತ್ತಾ?—ಇದ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 ತುಂಬಾ ಜನ ಕಳೆದ 30 ವರ್ಷಗಳಿಂದ ಅನೇಕ ದೇಶಗಳ ನಡುವೆ ಇರೋ ಸಂಬಂಧಗಳು ಸುಧಾರಿಸಿದೆ, ಶಾಂತಿ ಸಮಾಧಾನ ಇದೆ ಅಂತ ಅಂದ್ಕೊಂಡಿದ್ರು. ಆದ್ರೆ ಇತ್ತೀಚೆಗೆ ನಡೆದ ಘಟನೆಗಳಿಂದ ಇದು ನಿಜ ಅಲ್ಲ ಅಂತ ಗೊತ್ತಾಗ್ತಿದೆ.

  •   “ಇಸ್ರೇಲ್‌ ಮತ್ತು ಗಾಜಾ ನಡುವೆ ನಡಿತೀರೋ ಯುದ್ಧ ಹಿಜ್ಬುಲ್ಲಾ ಮತ್ತು ಲೆಬನೋನ್‌ ಗಡಿವರೆಗೂ ತಲುಪಿದೆ. ಹಾಗಾಗಿ ಈ ಯುದ್ಧದಿಂದ ತಮ್ಮ ದೇಶಕ್ಕೂ ಹಾನಿ ಆಗಬಹುದು ಅಂತ ಎಲ್ಲಾ ದೇಶಗಳು ಭಯಪಡ್ತಿವೆ.”—ರಾಯಿಟರ್ಸ್‌, ಜನವರಿ 6, 2024.

  •   “ಇರಾನ್‌ ನಿಯಂತ್ರಣದಲ್ಲಿರುವ ಗುಂಪುಗಳು ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸ್ತಿವೆ ಮತ್ತು ಇರಾನ್‌ ಇದ್ದಕ್ಕಿದ್ದಂತೆ ಮತ್ತೆ ಪರಮಾಣು (ನ್ಯೂಕ್ಲಿಯರ್‌) ಶಸ್ತ್ರಾಸ್ತ್ರಗಳನ್ನ ತಯಾರಿಸೋಕೆ ಶುರು ಮಾಡಿದೆ. ಅಷ್ಟೇ ಅಲ್ಲ, ರಷ್ಯಾ ಮತ್ತು ಚೀನಾ ಈಗ ಇರಾನಿನ ಮಿತ್ರರಾಷ್ಟ್ರಗಳಾಗಿವೆ. ಈ ಎಲ್ಲಾ ವಿಷ್ಯಗಳು ಪಾಶ್ಚಿಮಾತ್ಯ ದೇಶಗಳಿಗೆ ಹೊಸ ಬೆದರಿಕೆಯನ್ನ ಒಡ್ಡುತ್ತಿವೆ.”—ದಿ ನ್ಯೂಯಾರ್ಕ್‌ ಟೈಮ್ಸ್‌, ಜನವರಿ 7, 2024.

  •   “ರಷ್ಯಾ ಮಾಡ್ತಿರೋ ದಾಳಿಗಳಿಂದ ಯುಕ್ರೇನಿನಲ್ಲಿ ಗಂಭೀರ ಹಾನಿ ಆಗ್ತಿದೆ.”—ಯುಎನ್‌ ನ್ಯೂಸ್‌, ಜನವರಿ  11, 2024.

  •   “ಚೀನಾದಲ್ಲಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಮಿಲಿಟರಿ ಶಕ್ತಿ, ತೈವಾನಿನಲ್ಲಿ ಹೆಚ್ಚುತ್ತಿರುವ ದೇಶ ಭಕ್ತಿ ಮತ್ತು ಚೀನಾ ಹಾಗೂ ಅಮೆರಿಕದ ಮಧ್ಯೆ ಇರೋ ಉದ್ವಿಗ್ನ ಸಂಬಂಧವನ್ನ ನೋಡುವಾಗ ಯುದ್ಧಗಳು ಆಗುವ ಸಾಧ್ಯತೆ ಇದೆ ಅಂತ ಗೊತ್ತಾಗುತ್ತೆ.”—ದಿ ಜಪಾನ್‌ ಟೈಮ್ಸ್‌, ಜನವರಿ 9, 2024.

 ಲೋಕದಲ್ಲಿ ಎಲ್ಲಾ ಕಡೆ ನಡೀತಿರೋ ಯುದ್ಧಗಳ ಬಗ್ಗೆ ಬೈಬಲ್‌ ಏನಾದ್ರೂ ಹೇಳುತ್ತಾ? ಈ ಯುದ್ಧಗಳು ಇನ್ನೊಂದು ಮಹಾ ಲೋಕ ಯುದ್ಧಕ್ಕೆ ನಡೆಸುತ್ತಾ?

ಈಗ ನಡೀತಿರೋ ಘಟನೆಗಳ ಬಗ್ಗೆ ಬೈಬಲ್‌ ಮುಂಚೆನೇ ಹೇಳಿದೆ

 ನಾವೀಗ ನೋಡ್ತಿರೋ ಯಾವುದೇ ನಿರ್ದಿಷ್ಟವಾದ ಯುದ್ಧದ ಬಗ್ಗೆ ಬೈಬಲಿನಲ್ಲಿ ಹೇಳಿಲ್ಲ. ಆದ್ರೆ ನಮ್ಮ ಕಾಲದಲ್ಲಿ ಯುದ್ಧಗಳು ಸರ್ವೇ ಸಾಮಾನ್ಯವಾಗಿರುತ್ತೆ ಮತ್ತು ಅದ್ರಿಂದ ‘ಭೂಮಿಯಲ್ಲಿರೋ ಶಾಂತಿ ಹಾಳಾಗುತ್ತೆ’ ಅಂತ ಬೈಬಲ್‌ ಮುಂಚೆನೇ ಹೇಳಿದೆ.—ಪ್ರಕಟನೆ 6:4.

 “ಅಂತ್ಯದ ಸಮಯದಲ್ಲಿ” ಲೋಕ ಶಕ್ತಿಗಳು ಪರಸ್ಪರ “ಕಾಳಗ” ಮಾಡುತ್ತೆ ಅಥವಾ ತಮ್ಮ ಪ್ರಾಬಲ್ಯವನ್ನ ಉಳಿಸಿಕೊಳ್ಳೋಕೆ ಹೋರಾಟ ಮಾಡುತ್ತೆ ಅಂತ ದಾನಿಯೇಲ ಪುಸ್ತಕ ಮುಂಚೆನೇ ಹೇಳಿದೆ. ಈ ಹೋರಾಟದಲ್ಲಿ ಲೋಕ ಶಕ್ತಿಗಳು ತಮ್ಮ ಹತ್ರ ಇರೋ ದೊಡ್ಡ ಸೈನ್ಯಗಳ ಬಲವನ್ನ ಪ್ರದರ್ಶಿಸುತ್ತೆ ಮತ್ತು ತಮ್ಮ ಹತ್ರ ಇರೋ ಅಪಾರ ‘ಅಮೂಲ್ಯ ವಸ್ತುಗಳನ್ನ’ ಅಥವಾ ಆರ್ಥಿಕ ಸಂಪತ್ತನ್ನ ಖರ್ಚು ಮಾಡುತ್ತೆ ಅಂತನೂ ಬೈಬಲ್‌ ಹೇಳಿದೆ.—ದಾನಿಯೇಲ 11:40, 42, 43.

ಮುಂದೆ ಬರಲಿದೆ ಒಂದು ಯುದ್ಧ!

 ಮುಂದೆ ಒಂದು ಸುಂದರ ಭವಿಷ್ಯ ಬರೋಕೂ ಮುಂಚೆ ಲೋಕದ ಪರಿಸ್ಥಿತಿ ತುಂಬಾ ಹದಗೆಡುತ್ತೆ ಅಂತ ಬೈಬಲ್‌ ಹೇಳಿದೆ. ಯೇಸು ತುಂಬಾ ಸಮಯದ ಮುಂಚೆನೇ ‘ಮಹಾ ಸಂಕಟ ಬರುತ್ತೆ. ಲೋಕ ಆರಂಭ ಆದಾಗಿಂದ ಇವತ್ತಿನ ತನಕ ಅಂಥ ಕಷ್ಟ ಬಂದಿಲ್ಲ’ ಅಂತ ಹೇಳಿದನು. (ಮತ್ತಾಯ 24:21) “ಮಹಾ ಸಂಕಟ” ಅರ್ಮಗೆದ್ದೋನ್‌ ಯುದ್ಧದ ಮೂಲಕ ಕೊನೆ ಆಗುತ್ತೆ. ಇದನ್ನ “ಸರ್ವಶಕ್ತ ದೇವರ ಮಹಾ ದಿನದಲ್ಲಿ ಆಗೋ ಯುದ್ಧ” ಅಂತ ಹೇಳಲಾಗಿದೆ.—ಪ್ರಕಟನೆ 16:14, 16.

 ಆದ್ರೆ ಅರ್ಮಗೆದ್ದೋನ್‌ ಯುದ್ಧ ಮನುಷ್ಯರನ್ನ ನಾಶ ಮಾಡಲ್ಲ, ಬದಲಿಗೆ ಎಲ್ಲಾ ಮನುಷ್ಯರಿಗೆ ರಕ್ಷಣೆ ಕೊಡುತ್ತೆ. ಮಾನವರು ಮಾಡಿದ ಅನೇಕ ಯುದ್ಧಗಳು ವಿನಾಶಕ್ಕೆ ನಡೆಸಿವೆ, ಇಂತಹ ಮಾನವ ಸರ್ಕಾರಗಳನ್ನ ದೇವರು ಈ ಯುದ್ಧದಲ್ಲಿ ನಾಶ ಮಾಡ್ತಾನೆ. ಅರ್ಮಗೆದ್ದೋನ್‌ ಶಾಶ್ವತ ಶಾಂತಿಗೆ ಹೇಗೆ ನಡೆಸುತ್ತೆ ಅಂತ ತಿಳಿದುಕೊಳ್ಳಲು ಮುಂದಿನ ಲೇಖನಗಳನ್ನ ಓದಿ: