ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಲನಿರೋಧಕ ತಾವರೆ ಎಲೆ

ಜಲನಿರೋಧಕ ತಾವರೆ ಎಲೆ

ರಚಿಸಲ್ಪಟ್ಟಿತ್ತೋ?

ಜಲನಿರೋಧಕ ತಾವರೆ ಎಲೆ

◼ ಸ್ವಯಂ-ಸ್ವಚ್ಛಕ ಪ್ಲಾಸ್ಟಿಕ್‌ ಲೋಟಗಳು, ಮಳೆಸುರಿದರೂ ಒದ್ದೆಯಾಗದ ಕಿಟಿಕಿಗಳು, ಘರ್ಷಿಸದೆ ಕೆಲಸಮಾಡುವ ಸೂಕ್ಷ್ಮಾತಿಸೂಕ್ಷ್ಮ ಯಂತ್ರಗಳು ನಿಮಗೆ ಗೊತ್ತೋ? ತಾವರೆ ಎಲೆಯ ಗುಟ್ಟಗಳನ್ನು ಕಂಡುಹಿಡಿಯುವುದಾದರೆ ನಮಗೆ ದೊರಕುವ ಪ್ರಯೋಜನಗಳಲ್ಲಿ ಅವು ಕೆಲವೆಂದು ವಿಜ್ಞಾನಿಗಳು ಹೇಳುತ್ತಾರೆ.

ಪರಿಗಣಿಸಿ: ತಾವರೆ ಎಲೆಯ ಮೇಲ್ಮೈಯು ಸೂಕ್ಷಾತಿಸೂಕ್ಷ್ಮ ಉಬ್ಬುಗಳಿಂದ ಆವೃತವಾಗಿದೆ. ಇವುಗಳಲ್ಲಿ ಮೇಣದಂಥ ಹರಳುಗಳಿವೆ. ಎಲೆಯ ಮೇಲೆ ನೀರಿನ ಹನಿಗಳು ಬಿದ್ದಾಗ ಅವು ಈ ಉಬ್ಬುಗಳ ಮೇಲೆ ತೇಲಾಡುತ್ತವೆ. ಏಕೆಂದರೆ ಉಬ್ಬುಗಳು ಜಲನಿರೋಧಕಗಳಾಗಿ ಕಾರ್ಯನಡಿಸುತ್ತವೆ. ನೀರು ಬಿದ್ದಾಕ್ಷಣ ಅದು ಎಲೆಯ ತಳಭಾಗವನ್ನು ತಲಪುವ ಮೊದಲೇ ಎಲೆಗಳಲ್ಲಿರುವ ತಗ್ಗುಗಳು ಅದನ್ನು ಕೆಳಗೆ ಉರುಳಿಸುತ್ತವೆ. ಪರಿಣಾಮ? ತಾವರೆ ಎಲೆಯು ಒದ್ದೆಯಾಗದೆ ಉಳಿಯುತ್ತದೆ ಮಾತ್ರವಲ್ಲ ಸ್ವಚ್ಛವಾಗಿರುತ್ತದೆ. ಹೇಗೆಂದರೆ ಎಲೆಯ ಮೇಲಿರುವ ಕೊಳೆ ಮತ್ತು ಧೂಳು ನೀರಿನ ಹನಿಗಳೊಂದಿಗೆ ಇಳಿದುಹೋಗುತ್ತವೆ.

ತಾವರೆ ಎಲೆಯ ಜಲನಿರೋಧಕ ಶಕ್ತಿಯನ್ನು ನಕಲುಮಾಡಿ ವಸ್ತುಗಳನ್ನು ಉತ್ಪಾದಿಸಲು ವಿಜ್ಞಾನಿಗಳು ಬಯಸುತ್ತಾರೆ. ಅತಿ ಸೂಕ್ಷ್ಮ ಯಂತ್ರಗಳು ಸಹ ನೀರು ಬಿದ್ದಲ್ಲಿ ಹಾಳಾಗಬಲ್ಲವು. ಆದರೆ ತಾವರೆ ಎಲೆಯಂಥ ವಿನ್ಯಾಸದಿಂದ ಅವುಗಳೂ ಪ್ರಯೋಜನ ಹೊಂದಸಾಧ್ಯ. “ತಾವರೆ ಎಲೆಯ ಸಂಭಾವ್ಯ ಉಪಯುಕ್ತತೆಗಳಿಗೆ ಕೊನೆಮೊದಲಿಲ್ಲ” ಎಂದು ಹೇಳುತ್ತದೆ ಸೈಅನ್ಸ್‌ ಡೈಲಿ.

ನಿಮ್ಮ ಅಭಿಪ್ರಾಯ? ತಾವರೆ ಎಲೆ ಆಕಸ್ಮಿಕವಾಗಿ ಬಂತೋ? ಅಥವಾ ಸೃಷ್ಟಿಕರ್ತನಿಂದ ರಚಿಸಲ್ಪಟ್ಟಿತ್ತೋ? (g 4/09)