ಬೈಬಲ್‌ಏನು ಹೇಳುತ್ತದೆ?
ಚಿಂತೆ ನಿಭಾಯಿಸಲು ಬೈಬಲ್ ಸಹಾಯ ಮಾಡುತ್ತದಾ?
ನೀವೇನು ಹೇಳುತ್ತೀರಿ?
ಹೌದು
ಇಲ್ಲ
ಇರಬಹುದೇನೋ
ಬೈಬಲ್ ಏನನ್ನುತ್ತದೆ
“ನಿಮ್ಮ ಚಿಂತೆಯನ್ನೆಲ್ಲಾ ಆತನ [ದೇವರ] ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ಚಿಂತೆಗಳಿಂದ ಮುಕ್ತಿ ಪಡೆಯಲು ದೇವರು ಸಹಾಯ ಮಾಡುತ್ತಾನೆಂದು ಬೈಬಲ್ ಮಾತು ಕೊಡುತ್ತದೆ.
ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?
ಪ್ರಾರ್ಥನೆಯಿಂದ “ದೇವಶಾಂತಿಯನ್ನು” ಪಡೆಯಬಹುದು. ಇದು ಚಿಂತೆಯನ್ನು ಹೊಡೆದೋಡಿಸುತ್ತದೆ.—ಫಿಲಿಪ್ಪಿ 4:6, 7.
ಜೊತೆಗೆ, ದೇವರ ವಾಕ್ಯವನ್ನು ಪ್ರತಿದಿನ ಓದುವುದರಿಂದ ಜೀವನದ ಒತ್ತಡವನ್ನು ನಿಭಾಯಿಸಬಹುದು.—ಮತ್ತಾಯ 11:28-30.
ಚಿಂತೆಯೇ ಇಲ್ಲದ ಕಾಲ ಬರುತ್ತದಾ?
ಅನೇಕರ ನಂಬಿಕೆ . . . ಮನುಷ್ಯ ಅಂದಮೇಲೆ ಚಿಂತೆ ಒತ್ತಡ ಇದ್ದಿದ್ದೇ ಅಂತ ಕೆಲವರು ನಂಬಿದರೆ, ಇನ್ನು ಕೆಲವರು ಸತ್ತ ಮೇಲೆನೇ ಇದರಿಂದ ಬಿಡುಗಡೆ ಸಿಗೋದು ಅಂತಾರೆ. ನೀವೇನು ನೆನಸುತ್ತೀರಿ?
ಬೈಬಲ್ ಏನನ್ನುತ್ತದೆ
ಚಿಂತೆಗೆ ಕಾರಣವಾಗಿರುವ ಎಲ್ಲವನ್ನೂ ದೇವರು ತೆಗೆದುಹಾಕುತ್ತಾನೆ. ಅದಕ್ಕೇ, “ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ” ಎಂದು ಆತನು ಹೇಳಿದ್ದಾನೆ.—ಪ್ರಕಟನೆ 21:4.
ಬೈಬಲಿನಿಂದ ಇನ್ನೂ ಏನನ್ನು ಕಲಿಯಬಹುದು?
ದೇವರ ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಜೀವಿಸುತ್ತಾರೆ.—ಯೆಶಾಯ 32:18.
ಚಿಂತೆ ಮತ್ತು ಒತ್ತಡದ ಜ್ಞಾಪಕವೇ ಇರುವುದಿಲ್ಲ.—ಯೆಶಾಯ 65:17.