ಮಾಹಿತಿ ಇರುವಲ್ಲಿ ಹೋಗಲು

ವಿಕಾಸವೇ? ವಿನ್ಯಾಸವೇ?

ಆಕ್ಟೋಪಸ್‌ನ ವಿಸ್ಮಯಕರ ಕೈಗಳು

ಆಕ್ಟೋಪಸ್‌ನ ವಿಸ್ಮಯಕರ ಕೈಗಳು

 ರೊಬೋಟಿಕ್‌ ಇಂಜಿನಿಯರ್‌ಗಳು ದೇಹದ ಬಿಗಿಯಾದ ಭಾಗಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಸಹಾಯವಾಗುವ ಸಾಧನವನ್ನು ತಯಾರಿಸುತ್ತಿದ್ದಾರೆ. ಇದು ಚಿಕ್ಕ ರಂಧ್ರ ಮಾಡಿ ಅದರಲ್ಲಿ ತನ್ನ ಕೆಲಸವನ್ನು ಮುಗಿಸುತ್ತದೆ. ಇದನ್ನು ತಯಾರಿಸಲು ಇವರನ್ನು ಹೆಚ್ಚು ಪ್ರಭಾವಿಸಿದ್ದು ಆಕ್ಟೋಪಸ್‌ನ ಹೊಂದಿಸಿಕೊಳ್ಳುವ ಅದ್ಭುತ ಕೈಗಳು.

 ಪರಿಗಣಿಸಿ: ಆಕ್ಟೋಪಸ್‌, ತನ್ನ ಎಂಟು ಉದ್ದವಾದ ಮತ್ತು ಹೊಂದಿಸಿಕೊಳ್ಳುವ ಕೈಗಳಿಂದ ಚಿಕ್ಕ ಚಿಕ್ಕ ಜಾಗಗಳಲ್ಲೂ ವಸ್ತುಗಳನ್ನು ಹಿಡಿಯಬಲ್ಲದು, ಎಳೆಯಬಲ್ಲದು ಮತ್ತು ಹಿಸುಕಬಲ್ಲದು. ಅದು ತನ್ನ ಕೈಗಳನ್ನು ಬಾಗಿಸುವುದರ ಜೊತೆಗೆ, ಆ ಕೈಗಳ ಬೇರೆ ಬೇರೆ ಭಾಗಗಳನ್ನು ಅಗತ್ಯಕ್ಕೆ ತಕ್ಕಂತೆ ಬಿಗಿಯಾಗಿಸಿಕೊಳ್ಳುತ್ತದೆ.

 ಇಂಥ ಮೃದುವಾದ ಮತ್ತು ಹೊಂದಿಸಿಕೊಳ್ಳುವಂಥ ರೊಬೋಟ್‌ ಕೈಗಳು, ಚಿಕ್ಕ ರಂಧ್ರದಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಬಹಳ ಪ್ರಯೋಜನಕಾರಿ ಆಗಿರುತ್ತದೆ ಎಂದು ಸಂಶೋಧಕರು ನಂಬುತ್ತಾರೆ. ಈ ಸಾಧನಗಳನ್ನು ಹೆಚ್ಚು ಕಠಿಣವಾದ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳಿಗಾಗಿ ಬಳಸಬಹುದು.

 ಆಕ್ಟೋಪಸ್‌ನ ಹೊಂದಿಸಿಕೊಳ್ಳುವ ಕೈಗಳು ಹೇಗೆ ಕೆಲಸಮಾಡುತ್ತವೆ ನೋಡಿ

 ಇಂಥ ರೊಬೋಟಿಕ್‌ ಕೈಗಳನ್ನು ಈಗಾಗಲೇ ತಯಾರಿಸಲಾಗಿದ್ದು ಅವುಗಳನ್ನು ಪುನರಾವರ್ತನೆಯ ಶಸ್ತ್ರಚಿಕಿತ್ಸೆಯಲ್ಲಿ (ಸಿಮುಲೇಟೆಡ್‌ ಆಪರೇಷನ್ಸ್‌) ಬಳಸಲಾಗುತ್ತಿದೆ. 135 ಮಿಲಿಮೀಟರ್‌ ಉದ್ದವಿರುವ ಕೈನ ಒಂದು ಭಾಗ, ದೇಹದ ಒಳಗಿರುವ ಮೃದುವಾದ ಅಂಗಗಳನ್ನು ಮೇಲೆತ್ತಿ ಹಿಡಿದಿರುತ್ತದೆ. ಆದರೆ ಆ ಅಂಗಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಅದೇ ಸಮಯದಲ್ಲಿ ಇನ್ನೊಂದು ಕೈ ಅಗತ್ಯವಿರುವ ಶಸ್ತ್ರಚಿಕಿತ್ಸೆಯನ್ನು ಮಾಡುತ್ತದೆ. ಈ ಸಾಧನವನ್ನು ತಯಾರಿಸಿದ ತಂಡದ ಸದಸ್ಯರಾದ ಡಾ. ಟಮ್ಯಾಸೋ ರಾಂಜನಿಯವರು, “ಈ ವ್ಯವಸ್ಥೆಯು ಹೊಸದಾದ ಮತ್ತು ಅತ್ಯಾಧುನಿಕ ಶೈಲಿಯ ಹಾಗೂ ನೂತನ ವೈಶಿಷ್ಟ್ಯಗಳ ಆರಂಭವಾಗಿದೆ ಎಂದು ನಂಬುತ್ತೇವೆ” ಎಂದು ಹೇಳಿದರು

ಮೃದುವಾದ ಮತ್ತು ಹೊಂದಿಸಿಕೊಳ್ಳುವ ರೊಬೋಟಿಕ್‌ ಕೈ ಶಸ್ತ್ರಚಿಕಿತ್ಸೆಗೆ ಬಹಳ ಪ್ರಯೋಜನಕಾರಿ

 ನಿಮಗೇನು ಅನಿಸುತ್ತೆ? ಆಕ್ಟೋಪಸ್‌ನ ಕೈಗಳು ತನ್ನ ತಾನೇ ಬಂತಾ? ಅಥವಾ ಅದನ್ನು ದೇವರು ಸೃಷ್ಟಿಸಿದನಾ?